Bigg Boss Kannada 5: Week 7:big boss is one of the big reality showe in colors kannada , and big boss gave one activity in that activity niveditha gowda won watch this video
ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಕಾಮನ್ ಮ್ಯಾನ್ ಸ್ಪರ್ಧಿಗಳು ಎಂಬ ಎರಡು ಗುಂಪುಗಳಿದ್ದವು. ಆದ್ರೀಗ, ಈ ಲೆಕ್ಕಾಚಾರ ಬದಲಾಗಿದೆ. ಕಾಮನ್ ಮ್ಯಾನ್ ಸ್ಪರ್ಧಿಗಳ ಪೈಕಿ ಸದ್ಯ ಭಿನ್ನರಾಗ ಕೇಳಿ ಬರುತ್ತಿದೆ. ಒಂದ್ಕಡೆ ಚಂದನ್ ಶೆಟ್ಟಿ ಹಾಗೂ ದಿವಾಕರ್ ಆತ್ಮೀಯವಾಗಿದ್ದರೆ, ಇನ್ನೊಂದ್ಕಡೆ ರಿಯಾಝ್ ಮತ್ತು ಸಮೀರಾಚಾರ್ಯ ಸ್ನೇಹಿತರಂತಿದ್ದಾರೆ. ಅತ್ತ ಜಯಶ್ರೀನಿವಾಸನ್ ಹಾಗೂ ರಿಯಾಝ್ ಜೊತೆ ದಿವಾಕರ್ ಕಿತ್ತಾಟ ಮಾಡಿಕೊಂಡಿದ್ದರೆ, ಇತ್ತ ರಿಯಾಝ್ ಮೇಲೆ ಚಂದನ್ ಶೆಟ್ಟಿ ಮುನಿಸಿಕೊಂಡಿದ್ದಾರೆ.ಇವೆಲ್ಲವನ್ನೂ ನೋಡಿದ್ಮೇಲೆ, ರಿಯಾಝ್ ಮತ್ತು ಜಯಶ್ರೀನಿವಾಸನ್ ಇನ್ನಷ್ಟು ಹತ್ತಿರವಾಗಿದ್ದಾರೆ. ಚಂದನ್ ಶೆಟ್ಟಿ ಹಾಗೂ ದಿವಾಕರ್ ತಮಗೆ 'ಗುಂಡಿ ತೋಡಿ ಮಣ್ಣು ಹಾಕುತ್ತಿದ್ದಾರೆ' ಎಂಬ ಹೇಳಿಕೆಯನ್ನ ಜಯಶ್ರೀನಿವಾಸನ್ ನೀಡಿದ್ದಾರೆ. ಮುಂದೆ ಓದಿರಿ..''ರಿಯಾಝ್ ಗೇಮ್ ಆಡುತ್ತಿದ್ದಾರೆ. ಸ್ಟ್ರಾಟೆಜಿ ಮಾಡುತ್ತಿದ್ದಾರೆ. ನೀವು ಅವರ ಪ್ರಭಾವಕ್ಕೆ ಒಳಗಾಗಬೇಡಿ'' ಎಂದು ಜಯಶ್ರೀನಿವಾಸನ್ ಗೆ ಚಂದನ್ ಶೆಟ್ಟಿ ಹೇಳಿದ್ರಂತೆ. ಆ ಮಾತನ್ನ ರಿಯಾಝ್ ಮುಂದೆ ಜಯಶ್ರೀನಿವಾಸನ್ ಹೇಳಿದಾಗ, ''ಇದು ಎಷ್ಟು ಮನೆಹಾಳ ಕೆಲಸ. ನನಗೆ ರೂಲ್ಸ್ ಅಂದ್ರೆ ರೂಲ್ಸ್. ನಾನು ಯಾರನ್ನೂ ಬಿಡುವುದಿಲ್ಲ'' ಎಂದು ರಿಯಾಝ್ ಗುಡುಗಿದರು.